SRIMADHVYASA

Home » Harikathamruthasara – Sarvavyakhyana Sara Sangraha – H S SRINIVASA MURTHY

Harikathamruthasara – Sarvavyakhyana Sara Sangraha – H S SRINIVASA MURTHY

Harikathamruthasara is published in scanned Kannada PDF downloadable format

Called with reverence as Anu Sudha, Harikathamruthasara lushes out most important elements of dwaita philosophy in most lucid style, unambiguously.

Like a Busy Bee collecting nector, from the loveliest of flowers, Sri Jagannatha Dasaru, has collected the essence of tatwawada from myriad of sources like Veda, Purana, Itihasa, sarvamoola and what not. There is a saying “ಆಡು ಮುಟ್ಟದ ಸಪ್ಪಿಲ್ಲ”. This aptly applies to our humble and learned scholar Sri Jagannatha Dasaru. He has garnered all the relevant axioms from apt sources, with utmost elegance and clarity. Presentation comes with glaring unambiguity in no uncertain terms. Goddess Saraswathi and Bharathi has literally danced on his holy tongue, setting forth all the premayas in exquisite manner. Acharya Madhwa’s heart is distilled with supreme ability, in this noble work. Particularly for a common man it is an ambrosia, stuffed with all the tenets, in his noble journey of seeking Lord. Art of reconciliation and aptly intertwining the most intricate aspects of philosophy is breathtaking. Even learned scholars are dumbstruck at its lucid precision.

One should be really fortunate, even to have a glimpse of it. Those who can bring out the stanzas by heart, really reaps the beneficial harvest.

To summarise, its utility, see the Phalashruthi:

ಹರಿಕಥಾಮೃತ ಸಾರ ಶ್ರೀಮ-ದ್ಗುರುವರ ಜಗನ್ನಾಥ ದಾಸರು
ಕರ ತಲಾಮಲ-ಕವೆನೆ ಪೇಳಿದ ಸಕಲ ಸಂಧಿಗಳ।
ಪರಮ ಪಂಡಿತ-ಮಾನಿಗಳು ಮತ್ಸರಿಸ-ಲೆದೆಕಿಚ್ಚಾಗಿ ತೋರುವ
ದರಸಿ-ಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ॥33-1-989॥

ಭಾಮಿನೀ ಷಟ್ಪದಿಯ ರೂಪದ-ಲೀ ಮಹಾದ್ಭುತ ಕಾವ್ಯದಾದಿಯೊ
ಳಾ ಮನೋಹರ ತರತ-ಮಾತ್ಮಕ ನಾಂದಿ ಪದ್ಯಗಳ।
ಯಾಮ ಯಾಮಕೆ ಪಠಿಸುವವರ ಸುಧಾಮ ಸಖ ಕೈಪಿಡಿಯ-ಲೋಸುಗ
ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯ-ಕೇನೆಂಬೆ॥33-2-990॥

ಸಾರವೆಂದರೆ ಹರಿಕಥಾಮೃತ ಸಾರವೆಂ-ಬುವುದೆಮ್ಮ ಗುರುವರ
ಸಾರಿದಲ್ಲದೆ ತಿಳಿಯ-ದೆನುತ ಮಹೇಂದ್ರ ನಂದನನ
ಸಾರಥಿಯ ಬಲಗೊಂಡು ಸಾರಾಸಾರಗಳ ನಿರ್ಣಯಿಸಿ ಪೇಳ್ದನು
ಸಾರ ನಡೆವ ಮಹಾತ್ಮರಿಗೆ ಸಂಸಾರ-ವೆಲ್ಲಿಹುದೊ॥33-3-991॥

ದಾಸವರ್ಯರ ಮುಖದಿ ನಿಂದು ರಮೇಶನನು ಕೀರ್ತಿಸುವ ಮನದಭಿ
ಲಾಷೆಯಲಿ ವರ್ಣಾಭಿಮಾನಿ-ಗಳೊಲಿದು ಪೇಳಿಸಿದ।
ಈ ಸುಲಕ್ಷಣ ಕಾವ್ಯದೊಳು ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ
ಲೇಸು ಲೇಸೆನೆ ಶ್ರಾವ್ಯ-ಮಾದುದೆ ಕುರುಹು ಕವಿಗಳಿಗೆ॥33-4-992॥

ಪ್ರಾಕೃತೋ-ಕ್ತಿಗಳೆಂದು ಬರಿದೆ ಮಹಾ ಕೃತಘ್ನರು ಜರಿವರಲ್ಲದೆ
ಸ್ವೀಕೃತವ ಮಾಡದಲೆ ಬಿಡುವರೆ ಸುಜನ-ರಾದವರು।
ಶ್ರೀಕೃತೀ ಪತಿಯ-ಮಲ ಗುಣಗಳು ಈ ಕೃತಿಯೊ-ಳುಂಟಾದ ಬಳಿಕಿದು
ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಗುಣರಿಗೆ॥33-5-993॥

ಶ್ರುತಿಗೆ ಶೋಭನ-ವಾಗದೊಡೆ ಜಡಮತಿಗೆ ಮಂಗಳ-ವೀಯದೊಡೆ ಶ್ರುತಿ
ಸ್ಮೃತಿಗೆ ಸಮ್ಮತ-ವಲ್ಲದಿದ್ದೊಡೆ ನಮ್ಮ ಗುರುರಾಯ |
ಮಥಿಸಿ ಮಧ್ವಾಗಮ ಪಯೋಬ್ಧಿಯ ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ
ರತರಿ-ಗೀಪ್ಸಿತ ಹರಿಕಥಾಮೃತ ಸಾರ ಸೊಗಯಿಸದೆ॥33-6-994॥

ಭಕ್ತಿವಾದದಿಪೇಳ್ದರೆಂಬಪ್ರಸಕ್ತಿಸಲ್ಲದುಕಾವ್ಯದೊಳುಪುನ
ರುಕ್ತಿಶುಷ್ಕಸಮಾಸಪದವ್ಯತ್ಯಾಸಮೊದಲಾದ
ಯುಕ್ತಿಶಾಸ್ತ್ರವಿರುದ್ಧಶಬ್ದವಿಭಕ್ತಿವಿಷಮಗಳಿರಲುಜೀವ
ನ್ಮುಕ್ತಯೋಗ್ಯವಿದೆಂದುಸಿರಿಮದನಂತಮೆಚ್ಚುವನೆ॥33-7-995॥

ಆಶುಕವಿ ಕುಲ ಕಲ್ಪತರು ದಿಗ್ದೇಶ ವರಿಯಲು ರಂಗನೊ-ಲುಮೆಯ
ದಾಸ ಕೂಟಸ್ಥರಿ-ಗೆರಗಿ ನಾ ಬೇಡಿ ಕೊಂಬುವೆನು।
ಈ ಸುಲಕ್ಷಣ ಹರಿಕಥಾಮೃತ ಮೀಸಲ-ಳಿಯದೆ ಸಾರ ದೀರ್ಘ
ದ್ವೇಷಿಗಳಿ-ಗೆರೆಯದಲೆ ಸಲಿಸುವು-ದೆನ್ನ ಬಿನ್ನಪವ॥33-8-996॥

ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ
ಪ್ರಾಸಗಳ ಸಲ್ಲಿಸದೆ ಷಟ್ಪದಿ ಗತಿಗೆ ನಿಲ್ಲಿಸದೆ।
ದೂಷಕರು ದಿನ ದಿನದಿ ಮಾಡುವ ದೂಷಣವೆ ಭೂಷಣವು ಎಂದುಪ
ದೇಶ ಗಮ್ಯವು ಹರಿಕಥಾಮೃತ ಸಾರ ಸಾಧ್ಯರಿಗೆ॥33-9-997॥

ಅಶ್ರುತಾ-ಗಮ ಭಾವ-ವಿದರ ಪರಿಶ್ರಮವು ಬಲ್ಲವರಿ-ಗಾನಂ
ದಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕೃತಿಯು।
ಮಿಶ್ರರಿಗೆ ಮರೆಮಾಡಿ ದಿವಿಜರ ಜಸ್ರದಲಿ ಕಾಯ್ದಿಪ್ಪ-ರಿದರೊಳ
ಪಶ್ರುತಿ-ಗಳೈ ತಪ್ಪವೇ ನಿಜ ಭಕ್ತಿಯು-ಳ್ಳರಿಗೆ॥33-10-998॥

ನಿಚ್ಚ ನಿಜ ಜನ ಮೆಚ್ಚೆನೆಲೆ-ಗೊಂಡಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು
ಕೆಚ್ಚೆ ಕೇಳ್ವರು ಮೆಚ್ಚಿ ಮಲ ಮನ ಮುಚ್ಚಲೆಂ-ದೆನುತ।
ಉಚ್ಚ-ವಿಗಳಿಗೆ ಪೊಚ್ಚ ಪೊಸದೆನ-ಲುಚ್ಚರಿಸಿದೀ-ಸುಚ್ಚರಿತ್ರೆಯ
ನುಚ್ಚರಿಸೆ ಸಿರಿವತ್ಸ-ಲಾಂಛನ ಮೆಚ್ಚಲೇ-ನರಿದು॥33-11-999॥

ಸಾಧು ಸಭೆಯೊಳು ಮೆರೆಯೆ ತತ್ತ್ವ ಸು-ಬೋಧ ವೃಷ್ಟಿಯ-ಗರೆಯೆ ಕಾಮ
ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ।
ವಾದಿಗಳ ಪಲ್ಮುರಿಯೆ ಪರಮ ವಿನೋದಿಗಳ ಮೈಮರೆಯ-ಲೋಸುಗ
ಹಾದಿ ತೋರಿದ ಹಿರಿಯ ಬಹು ಚಾತುರ್ಯ ಹೊಸ ಪರಿಯ॥33-12-1000॥

ವ್ಯಾಸ ತೀರ್ಥರ ಒಲವು ವಿಠಲೋ-ಪಾಸಕ ಪ್ರಭುವರಿಯ ಪುರಂದರ
ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ।
ಕೇಶವನ ಗುಣ ಮಣಿಗಳನು ಪ್ರಾಣೇಶ-ಗರ್ಪಿಸಿ ವಾದಿರಾಜರ
ಕೋಶ-ಕೊಪ್ಪುವ ಹರಿಕಥಾಮೃತ ಸಾರ ಪೇಳಿದರು॥33-13-1001॥

ಹರಿಕಥಾಮೃತ ಸಾರ ನವರಸ ಭರಿತ ಬಹು ಗಂಭೀರ ರತ್ನಾ
ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ।
ಸರಸ ನರಕಂ-ಠೀರವಾಚಾ-ರ್ಯರ ಜನಿತ ಸುಕುಮಾರ ಸಾತ್ವೀ
ಕರಿಗೆ ಪರಮೋದಾರ ಮಾಡಿದ ಮರೆಯ-ದುಪಕಾರ॥33-14-1002॥

ಅವನಿಯೊಳು ಜ್ಯೋತಿಷ್ಮತಿಯ ತೈ-ಲವನು ಪಾಮರನುಂಡು ಜೀರ್ಣಿಸ
ಲವನೆ ಪಂಡಿತ-ನೋಕರಿಪ-ನವಿವೇಕಿ-ಯಪ್ಪಂತೆ।
ಶ್ರವಣ ಮಂಗಳ ಹರಿಕಥಾಮೃತ ಸವಿದು ನಿರ್ಗುಣ ಸಾರ ಮುಕ್ಕಿಸ
ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿ-ಯದಿದು॥33-15-1003॥

ಅಕ್ಕರ-ದೊಳೀ ಕಾವ್ಯದೊಳು ಒಂದಕ್ಕರವ ಬರೆದೋ-ದಿದವ ದೇ
ವರ್ಕಳಿಗೆ ದುಸ್ತ್ಯಜ-ನೆನಿಸಿ ಧರ್ಮಾರ್ಥ ಕಾಮಗಳ।
ಲೆಕ್ಕಿಸದೆ ಲೋಕೈಕ ನಾಥನ ಭಕ್ತಿ ಭಾಗ್ಯವ ಪಡೆವ ಜೀವ
ನ್ಮುಕ್ತ-ಗಲ್ಲದೆ ಹರಿಕಥಾಮೃತ ಸಾರ ಸೊಗಸುವುದೆ॥33-16-1004॥

ಒತ್ತಿ ಬಹ ವಿಘ್ನಗಳ ತಡೆ-ದಪ-ಮೃತ್ಯುವಿಗೆ ಮರೆ ಮಾಡಿ ಕಾಲನ
ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ
ಒತ್ತಿಗೊಳ್ಳಿಸಿ ವನರು-ಹೇಕ್ಷಣ ನೃತ್ಯ ಮಾಡುವ-ನವನ ಮನೆಯೊಳು
ನಿತ್ಯ ಮಂಗಳ ಹರಿಕಥಾಮೃತ ಸಾರ ಪಠಿಸುವರ॥33-17-1005॥

ಆಯುರಾರೋ-ಗ್ಯೈಶ್ವರ್ಯ ಯಶ-ಧೈರ್ಯ-ಬಲ-ವಿಜ್ಞಾನ-ಸಮ-ಸಾ
ಹಾಯ-ಶೌರ್ಯೋದಾರ್ಯ-ಗುಣ ಗಾಂಭೀರ್ಯ ಮೊದಲಾದ
ಆಯತಗ-ಳುಂಟಾಗ-ಲೊಂದ-ಧ್ಯಾಯ ಪಠಿಸಿದ ಮಾತ್ರದಿಂ ಶ್ರವ
ಣೀಯ-ವಲ್ಲವೆ ಹರಿಕಥಾಮೃತ ಸಾರ ಸುಜನರಿಗೆ॥33-18-1006॥

ಕುರುಡ ಕಂಗಳ ಪಡೆವ ಬಧಿರನಿ-ಗೆರಡು ಕಿವಿ ಕೇಳ್ಬಹವು ಬೆಳೆಯದ
ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ।
ಬರಡು ಹೈನಾಗುವದು ಪೇಳ್ದರೆ ಕೊರಡು ಪಲ್ಲೈಸುವುದು ಪ್ರತಿ ದಿನ
ಹುರುಡಿ-ಲಾದರು ಹರಿಕಥಾಮೃತ ಸಾರವನು ಪಠಿಸೆ॥33-19-1007॥

ನಿರ್ಜರ ತರಂಗಿಣಿ-ಯೊಳನುದಿನ ಮಜ್ಜನಾದಿ ಸಮಸ್ತ ಕರ್ಮ ವಿ
ವರ್ಜಿತಾಶಾ-ಪಾಶದಿಂದಲಿ ಮಾಡಿದ-ಧಿಕಫಲ।
ಹೆಜ್ಜೆ ಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರದೂಗು-ವಂದದಿ
ಗರ್ಜಿಸುತಲೀ ಹರಿಕಥಾಮೃತ ಸಾರ ಪಠಿಸುವಗೆ॥33-20-1008॥

ಸತಿಯರಿಗೆ ಪತಿ ಭಕುತಿ ಪತ್ನೀವ್ರತ ಪುರುಷರಿಗೆ ಹರುಷ ನೆಲೆಗೊಂ
ಡತಿ-ಮನೋಹರವಾಗಿ ಗುರು ಹಿರಿಯರಿಗೆ ಜಗದೊಳಗೆ।
ಸತತ ಮಂಗಳವೀವ ಬಹು ಸು-ಕೃತಿಗಳೆನಿಸುತ ಸುಲಭದಿಂ ಸ
ದ್ಗತಿಯ ಪಡೆವರು ಹರಿಕಥಾಮೃತ ಸಾರವನು ಪಠಿಸೆ॥33-21-1009॥

ಎಂತು ವರ್ಣಿಸ-ಲೆನ್ನಳವೆ ಭಗವಂತ-ನಮಲ ಗುಣಾನು-ವಾದಗ
ಳೆಂತು ಪರಿಯಲಿ ಪೂರ್ಣಬೋಧರ ಮತವ ಪೊಂದ್ಯವರ।
ಚಿಂತನೆಗೆ ಬಪ್ಪಂತೆ ಬಹು ದೃಷ್ಟಾಂತ ಪೂರ್ವಕವಾಗಿ ಪೇಳ್ದ ಮ-
ಹಾಂತರಿಗೆ ನರರೆಂದು ಬಗೆವರೆ ನಿರಯ ಭಾಗಿಗಳು॥33-22-1010॥

ಮಣಿ ಖಚಿತ ಹರಿವಾಣದಲಿ ವಾರಣ ಸುಭೋಜ್ಯ ಪದಾರ್ಥ ಕೃಷ್ಣಾ
ರ್ಪಣ-ವೆನುತ ಪಸಿದವರಿ-ಗೋಸುಗ ನೀಡುವಂದದಲಿ।
ಪ್ರಣತರಿಗೆ ಪೊಂಗನಡ ವರವಾ-ಙ್ಮಣಿಗಳಿಂ ವಿರಚಿಸಿದ ಕೃತಿಯೊಳು
ಉಣಿಸಿ ನೋಡುವ ಹರಿಕಥಾಮೃತ ಸಾರವನುದಾರ॥33-23-1011॥

ದುಷ್ಟ-ರೆನ್ನದೆ ದುರ್ವಿಷಯದಿಂ-ಪುಷ್ಟರೆನ್ನದೆ ಪೂತ ಕರ್ಮ
ಭ್ರಷ್ಟ-ರೆನ್ನದೆ ಶ್ರೀದವಿಟ್ಠಲ ವೇಣುಗೋಪಾಲ।
ಕೃಷ್ಣ ಕೈಪಿಡಿಯುವನು ಸತ್ಯ ವಿಶಿಷ್ಟ ದಾಸತ್ವವನು ಪಾಲಿಸಿ
ನಿಷ್ಠೆ-ಯಿಂದಲಿ ಹರಿಕಥಾಮೃತ ಸಾರ ಪಠಿಸುವರ॥33-24-1012॥

Our Beloved Acharya Sri H S Srinivasa Murthy dedicated his life in propagating the Dasa Sahithya.

MrsMr-H S SrinivasaMurthy

With pleasure we acknowledge his noble contribution in this noble venture.

One of his major works

“SrimadhHarikathamruthasara-Sarva-Vyakhyana-Sara-Sangraha”

is a compilation of major commentaries on Harikathamruthasara.

It starts with introduction, followed by word-by-word explanation of the Moola Shloka. Then comes the gist. Commentaries of several authors follows next. Assimilation of Gist from all Commentaries with special-meanings if any, under the caption “Sarva-Vyakhyana-Sara Sangraha” comes last.

In this mammoth work spanning 33 Volumes, he has assimilated the works of:

1. Commentary of Sankarshana Wodeyar.
2. Commentary – “Padaprakashike: of Tamraparni Acharya.
3. Commentary – “Bhavaprakashika” of Padmanabhar Dasaru.
4. Commentary – “Bhavadarpanateeka” of Kamalapathi Dasaru.
5. Commentary – “Guruhrudayaprakashika” of Guru Yogidhyeya Vittalankitha Raghavendra Dasaru.
6. Commentary – “Srivyasa-Dasa-Siddhatha-Kaumudhi” of Sri Jambhukhandi Vadirajacharya.
7. Commentary – Other Authors put together.

Unfortunately, all the volumes are out of print. But, with big heart, Smt. Saraswathi Vattam (Daughter-in-law) & Sri, Mohan H S, the son of Sri H S Srinivasa Murthy, has willingly permitted me to scan all the volumes and publish in our website, enabling it to reach all devotees interested in accessing them. They wrote:

Capture

With million thanks for their big hearted generosity, we publish the same:

Click the links below to view/Download volumewise:

HarikathamrithaSara-Kannada-Jagannathadasa-HKS-01

02-HarikathamrithaSara-Kannada-Jagannathadasa-HKS

HARIKATHAMRUTASARA-VOL3

HARIKATHAMRUTASARA-VOL4

SrimadhHarikathamrithasara-05-HKS-FULL

HARIKATHAMRUTASARA-VOL6

HARIKATHAMRUTASARA-VOL7

HARIKATHAMRUTASARA-VOL8

HARIKATHAMRUTASARA-VOL9

HARIKATHAMRUTASARA-VOL10

HARIKATHAMRUTASARA-VOL11

HarikathamrithaSara-Kannada-Jagannathadasa-HKS-12

HarikathamrithaSara-Kannada-Jagannathadasa-HKS-13

HARIKATHAMRUTASARA-VOL14

HARIKATHAMRUTASARA-VOL15

HARIKATHAMRUTASARA-VOL16

HARIKATHAMRUTASARA-VOL17

HARIKATHAMRUTASARA-VOL18

HARIKATHAMRUTASARA-VOL19

HARIKATHAMRUTASARA-VOL20

21.HKS

22.HKS

23.HKS

24.HKS

25.26.27.HKS

28.HKS

29.30.HKS

31.HKS

32.HKS

33.HKS

HarikathamrithaSara-Kannada-Jagannathadasa-HKS-02