SRIMADHVYASA

Home » Kannada Tantra-Mantra Bhava Padha Maale “DEVA POOJA PADDHATI”

Kannada Tantra-Mantra Bhava Padha Maale “DEVA POOJA PADDHATI”

TANTRA MANTRA BHAVA PADHA MAALE

ಮುನ್ನುಡಿ

“ ದೇವಪೂಜೆ ” ಪುರುಷಾರ್ಥಸಾಧನೆಗೆ, ಶಾಸ್ತ್ರಗಳು ವಿಧಿಸಿರುವ ಅಸಾಧಾರಣವಾದ
ಸಾಧನ. ಭಗವಂತನ ಅತ್ಯರ್ಥಪ್ರಸಾದದಿಂದಲೆ ಮೋಕ್ಷ. ಪರಮಭಕ್ತಿ ಅತ್ಯರ್ಥಕ್ಕೆ ಸಾಧನ. ಅಪರೋಕ್ಷಜ್ಞಾನಕ್ಕೆ ವಿಹಿತವಾದ ಸಾಧನವೇ ಕರ್ಮಯೋಗ. ಸ್ವವಿಹಿತ ಕರ್ಮಗಳನ್ನು ಭಗವದಾರಾಧನಪೂರ್ವಕವಾಗಿ ನಿಷ್ಕಾಮನೆಯಿಂದ ಆಚರಿಸುವುದೇ ಕರ್ಮಯೋಗದ ತಿರುಳು. ದೇವಪೂಜೆ ‘ಕರ್ಮಯೋಗ’ ಕ್ಕೆ ಪ್ರತೀಕದಿಂತಿರುವ ದಿವ್ಯ ಸಾಧನ. ದೇವಪೂಜೆಯನ್ನು ಬಿಟ್ಟು ಎತಹ ಸಾಧನೆಯು ವ್ಯರ್ಥವೇ ಸರಿ. ಉಪನೀತವಿಪ್ರರಿಗೆ ಸಂಧ್ಯಾವಂದನೆಯಷ್ಟೇ ಕಡ್ಡಾಯವಾಗಿರುವ ನಿತ್ಯಕರ್ಮಗಳಲ್ಲಿ ದೇವಪೂಜೆಗೇ ಅಗ್ರಸ್ಥಾನ. ‘ ಪೂಜ್ಯಶ್ಚ ಭಗವಾನ್ನಿತ್ಯಂ ಚಕ್ರಾಬ್ಜಾದಿಕಮಂಡಲೇ ’ – ತಂತ್ರಸಾರಸಂಗ್ರಹ. ಧ್ರುವಾದಿ ಮಹನೀಯರು ಮತ್ತು ಬ್ರಹ್ಮಾದಿದೇವತೆಗಳು ಗಳಿಸಿರುವ ಪೂಜ್ಯತೆಗೆ ಅವರ ಭಗವದಾರಾಧನೆಯೇ ಮುಖ್ಯ ಸಾಧನ ಎಂದು ಭಾಗವತಾದಿ ಪುರಾಣಗಳು ಸಾರುತ್ತಿವೆ. ದೇವಪೂಜೆಯ ಮಹತ್ತ್ವವನ್ನು ಶ್ರೀಮದಾನಂದತೀರ್ಥರು ತಮ್ಮ ಕೃಷ್ಣಾಮೃತಮಹಾರ್ಣವ, ಸದಾಚಾರಸ್ಮೃತಿ, ತಂತ್ರಸಾರಸಂಗ್ರಹ ಮೊದಲಾದ ಗ್ರಂಥಗಳಲ್ಲಿ ವಿಶೇಷವಾಗಿ ಪ್ರತಿಪಾದಿಸಿದ್ದಾರೆ.
ದೇವಪೂಜೆಯ ವಿಧಿವಿಧಾನಗಳನ್ನೆಲ್ಲ ವಿವರವಾಗಿ ನಿರೂಪಿಸಿರುವ ಮುಖ್ಯಕೃತಿ, ಶ್ರೀವಿಷ್ಣುಕೃತ ‘ತಂತ್ರಸಾರ’ . ಅದರ ಸಾರಸರ್ವಸ್ವವನ್ನು ಸಂಗ್ರಹಿಸಿಸುವ ಅಪೂರ್ವ ಕೃತಿ ಶ್ರೀಮದಾಚಾರ್ಯರ ‘ತಂತ್ರಸಾರಸಂಗ್ರಹ’. ತಂತ್ರಸಾರೋಕ್ತ ಪೂಜಾವಿಧಾನದ ಶ್ಲೋಕರೂಪವಿವರಣೆಯೇ ಶ್ರೀ ಟೀಕಾಕೃತ್ಪಾದರ ‘ಪದ್ಯಮಾಲಾ’ . ತಂತ್ರಸಾರ – ಪದ್ಯಮಾಲಾನುಸಾರಿಣೀ’ ಎಂದೇ ವೈಷ್ಣವದೇವ ಪೂಜಾಪದ್ಧತಿಯು ಪ್ರಸಿದ್ಧವಾಗಿವೆ. ತಂತ್ರಸಾರಸಂಗ್ರಹ ಪದ್ಯಮಾಲೆಗಳ ಟೀಕೆಗಳಲ್ಲಿ ಶ್ರೀವೇದವ್ಯಾಸತೀರ್ಥರು, ಶ್ರೀ ಸಮತೀಂದ್ರತೀರ್ಥರು ಮೊದಲಾದ ಮಹನೀಯರುಗಳು ರಚಿಸಿರುವ ಪೂಜಾವಿಷಯಕ ಗ್ರಂಥಗಳಲ್ಲೂ ದೇವಪೂಜೆಯ ಬಗ್ಗೆ ಸಾಕಷ್ಟು ವಿವರಗಳು ದೊರಯುತ್ತವೆ. ಶ್ರೀವಿಷ್ಣುತೀರ್ಥರ ‘ಸಂನ್ಯಾಸಪದ್ಧತಿ’ ಮತ್ತು ಶ್ರೀನಾರಾಯಣಪಂಡಿತಾಚಾರ್ಯರ ‘ಯೋಗದೀಪಿಕ’ ಗ್ರಂಥಗಳಲ್ಲೂ ಇದರ ಬಗ್ಗೆ ಅನೇಕ ಅಪೂರ್ವವಿಷಯಗಳು ಉಂಟು. ಇವುಗಳಲ್ಲಿ ಶ್ರೀ ಜಯತೀರ್ಥರ ‘ಪದ್ಯಮಾಲೆ’ ಪೂಜೆಯ ವಿಧಿವಿಧಾನಗಳ ನಿರೂಪಣೆಗೆಂದೇ ಮೀಸಲಾಗಿರುವ ಅತ್ಯಂತ ಮಹತ್ತ್ವದ ಕೃತಿ.
ಶ್ರೀ ಸೀತಾರಾಮದಾಸರ ‘ ದೇವ ಪೂಜ ತಂತ್ರ-ಮಂತ್ರ-ಭಾವ ಪದ್ಯಮಾಲೆ ’ ಎಂಬ ಪ್ರಕೃತ ಕೃತಿ ದೇವರಪೂಜೆಯ ವಿವರಗಳನ್ನು ಪದ್ಯರೂಪದಲ್ಲಿ ವಿವರಿಸುವ ಕೃತಿ. ಪ್ರಧಾನಾವಾಗಿ ‘ಪದ್ಯಮಾಲೆ’ ಯ ಭಾವಾನುವಾದದಂತಿರುವ ಇದರಲ್ಲಿ ಪುರುಷಸೂಕ್ತ, ಶ್ರೀಸೂಕ್ತ, ಅಂಭ್ರಣಿಸೂಕ್ತ ಮೊದಲಾದುವುಗಳ ಅನುವಾದವೂ ಸೇರಿದೆ. ಸಂಸ್ಕೃತದ ಶಾಸ್ತ್ರಗ್ರಂಥವೊಂದರ ಅನುವಾದಕಾರ್ಯ ಎಂದೂ ಸುಲಭಸಾಧ್ಯವಾದುದಲ್ಲ. ಆದರೆ ವಿಷಯಗ್ರಹಣಕ್ಕೆ ಪದ್ಯಮಾದ್ಯಮವನ್ನೇ ಮೆಚ್ಚುವ ಜನಕ್ಕೆ ಇಂತಹ ಅನುವಾದಗಳ ಅವಶ್ಯಕತೆ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಸೀತಾರಾಮದಾಸರ ಪ್ರಯತ್ನವು ಸ್ವಾಗತವಾರ್ಹವಾದದ್ದು. ಈಗಾಗಲೇ ತಮ್ಮ ಅನೇಕ ಕೃತಿಗಳಿಂದ ಪ್ರಸಿದ್ಧರಾಗಿರುವ ಶ್ರೀ ಸೀತಾರಾಮದಾಸರ ಈ ಕೃತಿ ದೇವಪೂಜೆಯ ವಿವರಗಳನ್ನು ತಿಳಿಯಬಯಸುವ ಜನಕ್ಕೆ ಉಪಯುಕ್ತವೆನಿಸುವುದರಲ್ಲಿ ಸಂಶಯವಿಲ್ಲ. ಇಂತಹ ಉಪಯುಕ್ತ ಗ್ರಂಥವನ್ನು ಸಿದ್ಧಪಡಿಸಿದ ಶ್ರೀಸೀತಾರಾಮದಾಸರು ಅಭಿನಂದನಾರ್ಹರಾಗಿದ್ದಾರೆ.

“Deva pooja paddhati – Understanding the Meaning in Kannada”

Only with God’s Grace, we can attain liberation. Pure and Unqualified Bhakthi is the only means to qualify for God’s Grace. Only with emancipation, Bhakthi is perfected. Sincerely doing one’s prescribed duty, is the only means for Emancipation. Devotion and Meditation are the most important duties prescribed. Worshipping God daily, in the prescribed manner, purifies our heart and absolves us of all our sins. Daily Worship should not be stereotyped and mechanical. Instead, understanding and appreciating the implications and purpose of all these rituals are must. Only with correct understanding, deeds are perfected. Only then, the desired benefits are reaped.

Ironically, most of us perform the pooja rituals mechanically. We tend to totally forget, the purpose and meaning of most of our rituals. Biggest problem we face, is our poor literacy and mastery of Sanskrit. Unfortunately, all our Mantra and Stotra are in Sanskrit medium. Often, we never understand the meaning and implications of most of the Mantra and Stotra. In most of the cases, at the end of rituals, ultimately none learns and understands the meaning and implications. Everyday, we are vexed with this problem. What is the way out? Either Learn Sanskrit or surrender to meaningful translations.

Most of the available translations are descriptive and voluminous. Neither the meaning, nor the mantra are seamless. Such works throws us out off track, especially when we are Chanting and performing. Heart and Mind forgets to perceive the inner meaning of Mantra and stotras.

Fortunately, we came across a poetic translation of Sanskrit ‘ Devara Pooja ‘ Mantra in Kannada. In its Poem form, it is very easy to by heart the same and simultaneously understand its meaning and implications, while performing Devara Pooja. Scholar Sri V Srinivasa Murthy ( Sitarama Dasa) has done this wonderful and very useful work. We express our deep gratitude and humble regards to this scholar, for his meaningful work. We trust, he will be pleased to see his work, being published and made more accessable.

We, without much knowledge in Sanskrit, find this work really useful, when we are doing Devara Pooja.

Can we scan and appreciate ?

DevaraPooja-Kannada Padyagalalli

ScannedKannadaDevapujaPadhathi


6 Comments

  1. Wonderful service done by you.

  2. wonderful work done by you.Great Thanks Pranesh.D.Joshi

  3. Gururaj Upadhyaya says:

    Most precious informations. Thankyou.

  4. Nagesh Rao P.N says:

    Excellent sir

  5. Dheerendra Aeri says:

    No words to explain the work done by you. Thank you very much for this great service

  6. excellent service sir

Leave a comment